ಬಾರ್ಥೊಲಿನಸ್, ಕ್ಯಾಸ್ಟರ್ (ಎರಡನೆಯ)
1658-1738 ದೇಹ ರಚನಾವಿಜ್ಞಾನಿ. ಇವನ ಆವಿಷ್ಕಾರದಿಂದ ಬೆಳಕಿಗೆ ಬಂದ ನಾಲಗೆಯ ಕೆಳಗಣ ಲಾಲಾ ಗ್ರಂಥಿಯ (ಸಬ್‍ಲಿಂಗ್ವಲ್) ನಾಳಕ್ಕೆ ಇವನ ಹೆಸರಿಟ್ಟು ಗೌರವಿಸಿದ್ದಾರೆ. ಸಂಭೋಗ ಸಮಯದಲ್ಲಿ ಯೋನಿಮಾರ್ಗದಲ್ಲಿ ಸುಲಭ ಚಾಲಕದ್ರವವನ್ನು ಸರವಿಸುವ ಯೋನಿಯೊಳಗಣ ಅತಿಸಣ್ಣ ಗ್ರಂಥಿಗಳಿಗೆ ಬಾರ್ಥೊಲಿನ್ ಗ್ರಂಥಿಗಳೆಂದು ಕರೆದಿರುವುದೂ ಇದೇ ಕಾರಣಕ್ಕಾಗಿ. (ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ